ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

Category Archives: Uncategorized

‘ಮಾಯಾಬಜಾರ್’ ನೂರು ವರುಷ…

ಯಾರೊಬ್ಬರಿಗಾದರೂ ಅರಿವಿತ್ತೆ? ಪಶ್ಚಿಮದಲ್ಲಿ ಹುಟ್ಟಿ ಬಂದ ಇದು, ನೂರೇ ವರ್ಷಗಳಲ್ಲಿ ತ್ರಿವಿಕ್ರಮನಾಗಿ ಬೆಳೆದು, ತನ್ನ ಅಸ್ತಿತ್ವವನ್ನು ಸ್ಥಾಪಿಸಿ ನಮ್ಮನ್ನೆಲ್ಲ ಹೀಗೆ ಆಳುತ್ತದೆ ಎಂದು? ಅದಕ್ಕೇ ಇದನ್ನು ‘ಮಾಯಾಬಜಾರ್’ ಎಂದು ಕರೆಯುವುದು! * * * ಡಿಸೆಂಬರ್ 28, 1895 ಪ್ರಪಂಚದ ಚಲನಚಿತ್ರಜಗತ್ತಿಗೆ ವಿಶೇಷ ದಿನವಾದರೆ; ಮೇ 3, 1913 ಭಾರತದ ಚಲನಚಿತ್ರರಂಗಕ್ಕೆ ಪ್ರಮುಖವಾದ ವರ್ಷ. ಅಲ್ಲಿ ಲ್ಯೂಮಿಯೇರ್ ಸಹೋದರರು ಜಗತ್ತಿನ ಚಲನಚಿತ್ರಕ್ಕೆ ಮಾತಾಪಿತೃಗಳಾದರೆ; ಇಲ್ಲಿ ದಾದಾಸಾಹೇಬ್ ಫಾಲ್ಕೆ ‘ರಾಜಾ ಹರಿಶ್ಚಂದ್ರ’ ಚಿತ್ರವನ್ನು ತಯಾರಿಸಿ ಭಾರತದ ಪಾಲಿಗೆ ಚಲನಚಿತ್ರದ …

ಓದನ್ನು ಮುಂದುವರೆಸಿ

ಭಾರತೀಯ ಚಿತ್ರಗಳಲ್ಲಿ ಹೊಸ ಅಲೆ

ಈ ಶತಮಾನದ ಅಚ್ಚರಿ ಸಿನಿಮಾ. ಇದು ಭಾರತೀಯ ಚಲನಚಿತ್ರರಂಗದ ನೂರನೇ ವರ್ಷ. ಈ ಸಂದರ್ಭದಲ್ಲಿ ‘ಸಿನಿಮಾ ಎಂದರೆ ಏನು?’ ಎಂದು ಯಾರನ್ನಾದರೂ ಕೇಳಿ ನೋಡಿ. ಅವರು ತಕ್ಷಣ ಕೊಡುವ ಉತ್ತರ: ‘ಸಿನಿಮಾ- ಒಂದು ಮನರಂಜನೆ. ಹಾಡು, ಕುಣಿತ, ಹೊಡೆದಾಟ, ಐಟಂ ಸಾಂಗ್, ಹಾಸ್ಯ, ಮಸಾಲೆ ಇತ್ಯಾದಿ… ಇದೆಲ್ಲ ಬೆರೆತದ್ದೇ ಸಿನಿಮಾ.’ ಹೌದು. ನಮ್ಮ ದೇಶದಲ್ಲಿ ಮುಕ್ಕಾಲುಪಾಲು ಸಿನಿಮಾ ಗುರುತಿಸಿಕೊಂಡಿರುವ ಬಗೆ ಹೀಗೆ. ಪ್ರಪಂಚದಲ್ಲೇ ಅತಿ ಹೆಚ್ಚು ಚಿತ್ರಗಳನ್ನು ತಯಾರಿಸುವ ದೇಶ ನಮ್ಮದು. ಭಾರತೀಯ ಸಿನಿಮಾವನ್ನು ಆಳುತ್ತಿರುವುದು ಬಾಲಿವುಡ್. …

ಓದನ್ನು ಮುಂದುವರೆಸಿ

‘ಭಾರತ್ ಸ್ಟೋರ್ಸ್’ ಹುಟ್ಟಿದ ಕತೆ…

‘ಸಿನಿಮಾ ಮಾಡಲು ನಿಮಗೆ ಕತೆ ಹೇಗೆ ಸಿಗುತ್ತೆ?’ -ಇದು ನನ್ನನ್ನು ಕೆಲವರು ಭೇಟಿಯಾದಾಗ ಕೇಳುವ ಮುಖ್ಯವಾದ ಮಾತು. ಅವರ ಪ್ರಶ್ನೆಗಳು ಮುಂದುವರಿಯುತ್ತವೆ. ‘ಕತೆಯನ್ನು ಎಲ್ಲಿ ಹುಡುಕುತ್ತೀರಿ? ಇದು ಸಿನಿಮಾಗೆ ಸೂಕ್ತ ಎಂದು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ?’ ಇತ್ಯಾದಿ.. *** ನಿಜ ಹೇಳಲಾ? ಕೆಲವೊಮ್ಮೆ ಕಥೆಯನ್ನು ನಾವು ಹುಡುಕಿಕೊಂಡು ಹೋಗಲೇಬೇಕಿಲ್ಲ. ಅದೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ! ಉದಾಹರಣೆಗೆ, ನಾನು ಇತ್ತೀಚೆಗೆ ತಯಾರಿಸಿದ ಚಿತ್ರ ‘ಭಾರತ್ ಸ್ಟೋರ್ಸ್’. ನಿಮಗೆ ಇದು ಸಿಕ್ಕ ಕತೆ ಹೇಳುತ್ತೇನೆ ಕೇಳಿ. ‘ಬೆಟ್ಟದ ಜೀವ’ ಚಲನಚಿತ್ರದ …

ಓದನ್ನು ಮುಂದುವರೆಸಿ

ಚಿತ್ರೋತ್ಸವ ಮತ್ತು ನಾನು…

ನಾನು ಹುಟ್ಟಿದ್ದು, ಬಾಲ್ಯ ಕಳೆದದ್ದು, ಯೌವನಿಗನಾದದ್ದು ಹಳ್ಳಿಯಲ್ಲಿ… ಇದು ಅರವತ್ತರ ದಶಕದ ಮಾತು..  ಆಗ ನಮ್ಮೂರಲ್ಲೂ ಒಂದು ಟೆಂಟಿತ್ತು!ರಾತ್ರಿ ಕತ್ತಲೆಯಾದ ಮೇಲೆ ಚಿತ್ರದ ಆಟ ಆರಂಭವಾಗುತ್ತಿತ್ತು.ಸಂಜೆ ಏಳು ಗಂಟೆಗೆ ಮೊದಲ ಆಟ ಮತ್ತು ರಾತ್ರಿ ಒಂಭತ್ತೂವರೆಗೆ ಎರಡನೆಯದು.ಅಪ್ಪ ಮೇಷ್ಟ್ರಾಗಿದ್ದರು.  ವಿದ್ಯಾರ್ಥಿಗಳು ಸಿನಿಮಾ ನೋಡಿದರೆ ಹಾಳಾಗುತ್ತಾರೆ ಎಂದೇ ನಂಬಿದ್ದವರು ಹಾಗೂ ಅದನ್ನೇ ಬೋಧಿಸುತ್ತಿದ್ದವರು.  ಇನ್ನು ಮೇಷ್ಟ್ರ ಮಗ ಸಿನಿಮಾ ನೋಡುವುದು ಹೇಗೆ?ಆಗ ನೆರವಿಗೆ ಬರುತ್ತಿದ್ದವಳು ಅಮ್ಮ.  ಅವಳು ಹೇಳಿದಂತೆ ಕೇಳಿಕೊಂಡಿದ್ದರೆ ತಿಂಗಳಿಗೊಂದು ಸಿನಿಮಾ ನೋಡಲು ಪರ್ಮಿಷನ್ ಸಿಗುತ್ತಿತ್ತು.ಆ ಒಪ್ಪಿಗೆ …

ಓದನ್ನು ಮುಂದುವರೆಸಿ

ಬೊಳುವಾರರ ಮಹಾ ಓಟ!

(ವಿಲನ್ ಇಲ್ಲದಿರುವುದೊಂದೇ ಈ ಕಾದಂಬರಿಯ ಕೊರತೆ!) ಕೆಲ ವರ್ಷದ ಹಿಂದಿನ ನೆನಪು ಇದು. ಒಂದು ದಿನ ಬೊಳುವಾರು ದಂಪತಿಗಳು ಮನೆಗೆ ಬಂದಿದ್ದರು. ಪ್ರಾಸಂಗಿಕವಾಗಿ ಅದೂ ಇದೂ ಮಾತನಾಡುತ್ತಾ ನನ್ನ ಮುಂದಿನ ಚಿತ್ರದ ಬಗ್ಗೆ ಕೇಳಿದರು. ಅಷ್ಟರಲ್ಲಾಗಲೇ ನಾನು ‘ಮುನ್ನುಡಿ’, ‘ಅತಿಥಿ’ ಮತ್ತು ‘ಬೇರು’ ಚಿತ್ರ ಮಾಡಿದ್ದೆ. ನಾನು ಹೊಸ ಕತೆಯ ಹುಡುಕಾಟದಲ್ಲಿ ಇರುವ ವಿಚಾರ ಹೇಳಿದೆ. ‘ನಿಮಗೆ ಹೇಗೂ ಮುನ್ನುಡಿಯಲ್ಲಿ ನನ್ನೊಂದಿಗಿದ್ದು ಅನುಭವವಿದೆಯಲ್ಲಾ, ಮುಂದಿನ ಸಿನಿಮಾಗೆ ಒಂದು ಒಳ್ಳೇ ಕತೆ ಬರೆದುಕೊಡಿ’ ಎಂದೆ. ‘ನಾನು ಬ್ಯಾಂಕಿನ ಕೆಲಸ …

ಓದನ್ನು ಮುಂದುವರೆಸಿ

ಕಾಶಿ, ಸಾಯಲು ಹೊರಟವರ ಕೊನೇತಾಣ!

ಕಾಶಿ ಎಂದಾಕ್ಷಣ ಫಕ್ಕನೆ ನೆನಪಿಗೆ ಬರುವುದು: ಕಾಶಿ ವಿಶ್ವನಾಥ, ಕಲುಷಿತವಾದ ಗಂಗೆ, ಜನನಿಬಿಡ ಗಲ್ಲಿಗಳು, ಸಾಧು ಸನ್ಯಾಸಿಗಳು, ಬೆನ್ನು ಬಿದ್ದು ಕಾಸು ಕೀಳುವ ಪಂಡಾಗಳು, ಮತ್ತು ಅಗಾಧ ಭಕ್ತ ಸಮೂಹ.. ಇಂಥ ಕಾಶಿಗೆ ಬರೀ ಪುಣ್ಯಕ್ಷೇತ್ರ ದರ್ಶನಕ್ಕೆ ಬರುವುದಿಲ್ಲ, ಸಾಯಲೂ ಬರುತ್ತಾರೆ! ಕಾಶಿಯಲ್ಲಿ ಸಾಯಲು ಬರುವವರಿಗೆ ವಿಶೇಷ ಮರ್ಯಾದೆ ಇದೆ. ಸತ್ತ ನಂತರ ಅವರಿಗೆ ಮುಕ್ತಿಪ್ರಾಪ್ತಿಯಾಗುತ್ತದಂತೆ. ಹಾಗಾಗಿ, ಕೆಲವರು ಸಾಯುವ ಹಂತದಲ್ಲಿ ಇಲ್ಲಿಗೆ ಬಂದು ಕೆಲಕಾಲ ತಂಗಿ ದೇಹತ್ಯಾಗ ಮಾಡಿದರೆ; ಇನ್ನುಳಿದವರು ಸತ್ತನಂತರ ಕೂಡ ದೇಹವನ್ನು ಇಲ್ಲಿಗೆ …

ಓದನ್ನು ಮುಂದುವರೆಸಿ

‘ಕತೆ’ಯಾದ ಕಲಾವಿದ!

ಅಂದು, ಸಂಜೆ ಏಳೂವರೆಯ ಸಮಯ. ಬೆಂಗಳೂರಿನ ಜಯನಗರದ ಐದನೇ ಬ್ಲಾಕ್‌ನ ಮನೆಯ ಹೊರಗಿನ ಅಂಗಳದಲ್ಲಿ ಕುಳಿತು ಅವರು ತದೇಕಚಿತ್ತದಿಂದ ನಾನು ಹೇಳುತ್ತಿದ್ದ ಕತೆ ಕೇಳುತ್ತಿದ್ದರು. ಕತೆ ಕೇಳುವುದಕ್ಕೆ ಮುಂಚೆಯೇ ತಮ್ಮ ಸಹಾಯಕನನ್ನು ಕರೆದು, ಮಧ್ಯೆ ನನ್ನನ್ನು ಡಿಸ್ಟರ್ಬ್ ಮಾಡಬೇಡಿ ಎಂಬ ಸೂಚನೆ ಕೂಡ ಕೊಟ್ಟಿದ್ದರು. ನಂತರ ಸುಮಾರು ಎರಡು ಗಂಟೆಗಳ ಕಾಲ ಕುಳಿತಲ್ಲಿಂದ ಅಲ್ಲಾಡಲಿಲ್ಲ ಹಾಗೂ ಯಾವುದೇ ಫೋನ್ ಕರೆಯನ್ನು ಕೂಡ ಸ್ವೀಕರಿಸಲಿಲ್ಲ. ಕತೆ ಹೇಳುವುದು ಮುಗಿದ ಮೇಲೆ ಆರಾಮ ಕುರ್ಚಿಯ ಹಿಂದೆ ಒರಗಿ ಒಮ್ಮೆ ದೀರ್ಘವಾಗಿ …

ಓದನ್ನು ಮುಂದುವರೆಸಿ

‘ಬೆಟ್ಟದ ಜೀವ’ದ ಬಗ್ಗೆ ಅನಂತಮೂರ್ತಿ…

ಅಂದು, ಗುರುವಾರ ಜೂನ್ ೨೩ನೇ ದಿನ. ‘ಬೆಟ್ಟದ ಜೀವ’ ಚಿತ್ರದ ವಿಶೇಷ ಪ್ರದರ್ಶನವನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೆ. ಡಾ.ಯು.ಆರ್.ಅನಂತಮೂರ್ತಿ ಚಿತ್ರನೋಡಲು ಬಂದಿದ್ದರು. ‘ನೀವು ಬಂದದ್ದು ತುಂಬಾ ಸಂತೋಷ ಸಾರ್’ ಎಂದೆ. ಅದಕ್ಕೆ ಅವರು, ‘ಆದ್ರೆ ನಂಗೆ ಇರುಸು-ಮುರುಸಾಗ್ತಾ ಇದೆ ಕಣಯ್ಯಾ’ ಎಂದರು. ‘ಯಾಕ್ ಸಾರ್?!’ ಎಂದೆ. ‘ನಾನು ಈ ಮಾಲ್‌ಗಳ ವಿರೋಧಿ. ಇದನ್ನು ಒಡೆದು ಹಾಕಬೇಕು ಅಂತ ಕರೆ ಕೊಟ್ಟವನು. ಈಗ ನೋಡು, ಎಂಥ ವೈರುಧ್ಯ! ನಿನ್ನ ಸಿನಿಮಾ ನೋಡುವ ಕಾರಣದಿಂದ ಇವತ್ತು ಇದರೊಳಕ್ಕೆ ಹೆಜ್ಜೆ ಇಡಲೇ …

ಓದನ್ನು ಮುಂದುವರೆಸಿ

ಒಂದೇ ದಿನ, ಮೂರು ಕಡೆ, ಮೂರು ಚಿತ್ರಗಳ ಪ್ರದರ್ಶನ…

ನಿನ್ನೆ, ಅಂದರೆ ೨೦೧೧ ಜುಲೈ ತಿಂಗಳ ಹದಿಮೂರನೇ ದಿನ, ನನಗೆ ಸಂತೋಷವಾಗಲು ಮೂರು ಕಾರಣಗಳಿದ್ದವು. ಒಂದು, ‘ಬೆಟ್ಟದ ಜೀವ’ ಚಿತ್ರ ಮೂರನೇ ವಾರ ಚಿತ್ರಮಂದರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂದೂ ಕೂಡ ತುಂಬ ಫೋನ್ ಮಾಡಿ ಚಿತ್ರನೋಡಲು ಎರಡನೇ ಬಾರಿ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಇದು ನಿಜವಾದ ಸಮಾಧಾನವಲ್ಲವೇ? ಎರಡು, ಮಧ್ಯಾಹ್ನ ಬೆಂಗಳೂರಿನ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ‘ತುತ್ತೂರಿ’ಚಿತ್ರವನ್ನು ಪ್ರದರ್ಶಿಸಿ ನಂತರ ಪ್ರೇಕ್ಷಕರೊಂದಿಗೆ ಚರ್ಚೆ ಏರ್ಪಡಿಸಿದ್ದರು. ಚಿತ್ರ ಬಂದು ಆರು ವರ್ಷ ಕಳೆದಿದ್ದರೂ, ಈ ಕಥಾವಸ್ತು ಅಂದಿಗಿಂತ …

ಓದನ್ನು ಮುಂದುವರೆಸಿ

ಪುಟ್ಟಕ್ಕನ ಹೆದ್ದಾರಿ!

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು. ಆಗ ನಾನು ಕರ್ನಾಟಕ ಟೆಲಿವಿಷನ್ ಸಂಘಟನೆಯ ಅಧ್ಯಕ್ಷನಾಗಿದ್ದೆ, ಗೆಳೆಯ ಬಿ.ಸುರೇಶ ಕಾರ್ಯದರ್ಶಿಯಾಗಿದ್ದ. ದಾವಣಗೆರೆಯಲ್ಲಿ ನಮ್ಮ ಸಂಘಟನೆಯಿಂದ ಮನರಂಜನಾ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆವು. ಹಾಗಾಗಿ ಒಂದು ತಿಂಗಳುಗಳ ಕಾಲ ದಾವಣಗೆರೆಗೂ ಬೆಂಗಳೂರಿಗೂ ವಾರಕ್ಕೆ ಎರಡು ಮೂರು ಬಾರಿಯಂತೆ ಕಾರಿನಲ್ಲಿ ಹೋಗಿ ಬಂದು ಮಾಡುತ್ತಿದ್ದೆವು. ತುಮಕೂರು ದಾಟಿದ ನಂತರ ವಾಜಪೇಯಿ ಕನಸಿನ ಕೂಸಾದ ಷಟ್ಪಥದ ಹೆದ್ದಾರಿ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಆಗಿನ್ನೂ ಈ ‘ನೈಸ್’ ಇತ್ಯಾದಿಗಳು ಬಂದಿರಲಿಲ್ಲ. ಕರ್ನಾಟಕದ ಮಟ್ಟಿಗೆ ಇದೇ ದೊಡ್ಡ ಹೆದ್ದಾರಿ. …

ಓದನ್ನು ಮುಂದುವರೆಸಿ