ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

Monthly Archives: ಜುಲೈ, 2013

‘ತಿಮ್ಮರುಸು’ ಎಂಬ ಚತುರ ಮಂತ್ರಿ…

ವಿಜಯನಗರದ ಇತಿಹಾಸದಲ್ಲಿ ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದ ಮಹಾಮಂತ್ರಿ ತಿಮ್ಮರುಸುವಿಗೆ ವಿಶೇಷ ಸ್ಥಾನವಿದೆ. ಈತನ ಬದುಕೇ ಒಂದು ದುರಂತ ಪಯಣ. ತಿಮ್ಮರುಸು ‘ನಿಯೋಗಿ ತೆಲುಗು ಬ್ರಾಹ್ಮಣ’ ಪಂಗಡಕ್ಕೆ ಸೇರಿದವನು. ಕೃಷ್ಣದೇವರಾಯನಿಗೂ ಮುಂಚೆ ವಿಜಯನಗರ ಸಂಸ್ಥಾನವನ್ನು ವೀರನರಸಿಂಹರಾಯ ಆಳುತ್ತಿದ್ದನು. ಅವನ ಆಳ್ವಿಕೆಯಲ್ಲಿಯೇ ತಿಮ್ಮರುಸು ಮಹಾಮಂತ್ರಿಯಾಗಿದ್ದ. ಪೋರ್ಚಗೀಸ್ ಪ್ರವಾಸಿಗ ಫೆರ್ನಾವ್ ನುನಿಜ್ (Fernao Nuniz) ಬರೆದಿರುವ ಪ್ರಕಾರ, ವೀರನರಸಿಂಹರಾಯನಿಗೆ ಮರಣ ಸನ್ನಿಹಿತವಾದ ಸಂದರ್ಭ. ಮರಣಶಯ್ಯೆಯಲ್ಲಿದ್ದ ದೊರೆಗೆ ತನ್ನ ನಂತರ ವಿಜಯನಗರದ ಸಿಂಹಾಸನ ಯಾರ ಪಾಲಾಗುತ್ತದೋ ಎಂಬ ಚಿಂತೆ ಕಾಡುತ್ತಿದೆ. ಆಗ ಸಿಂಹಾಸನವೇರಲು ಮುಂಚೂಣಿಯಲ್ಲಿದ್ದ …

ಓದನ್ನು ಮುಂದುವರೆಸಿ