ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

Monthly Archives: ಜೂನ್, 2013

ಕ್ಯಾಮರಾ ಹಿಂದಿನ ಕ್ರಾಂತಿಕಾರಿ

ಮೇ 30, ಬೆಳಗ್ಗೆ.   ನ್ಯೂಸ್‌ಚಾನಲ್‌ನ ಮಿತ್ರರೊಬ್ಬರು ಫೋನ್ ಮಾಡಿ, ಹನ್ನೊಂದು ಗಂಟೆಯ ನ್ಯೂಸ್‌ಗೆ ನಿಮ್ಮದೊಂದು ಬೈಟ್(ಪ್ರತಿಕ್ರಿಯೆ) ಬೇಕಿತ್ತು, ಫೋನ್ ಮಾಡ್ತೀವಿ, ಸಿದ್ಧವಿರುವಿರಾ? ಎಂದು ಕೇಳಿದರು.  ‘ಯಾವ ವಿಷಯದ ಕುರಿತಾಗಿ?’ ಎಂದು ಕೇಳಿದೆ.  ‘ರಿತುಪರ್ಣೋ ಘೋಷ್ ಹೋಗಿಬಿಟ್ಟರಲ್ಲ, ಯಾಕೆ ನಿಮಗೆ ಗೊತ್ತಿಲ್ಲವೇ?’ ಎಂದಾಗ ನನ್ನ ಮನದ ತಲ್ಲಣವನ್ನು ನೀವೇ ಊಹಿಸಿಕೊಳ್ಳಿ… ಛೇ ಛೆ! ಹೀಗಾಗಬಾರದಿತ್ತು. ನಲವತ್ತೊಂಬತ್ತು ಸಾಯುವ ವಯಸ್ಸೆ? ಹಾಗೆ ನೋಡಿದರೆ ನನಗೂ ಈಗ ನಲವತ್ತೊಂಬತ್ತು.  ನನಗಿಂತ ರಿತುಪರ್ಣರು ಕೇವಲ ಮೂರು ತಿಂಗಳು ದೊಡ್ಡವರು ಅಷ್ಟೇ!  ನಮ್ಮದೇ …

ಓದನ್ನು ಮುಂದುವರೆಸಿ

‘ಮಾಯಾಬಜಾರ್’ ನೂರು ವರುಷ…

ಯಾರೊಬ್ಬರಿಗಾದರೂ ಅರಿವಿತ್ತೆ? ಪಶ್ಚಿಮದಲ್ಲಿ ಹುಟ್ಟಿ ಬಂದ ಇದು, ನೂರೇ ವರ್ಷಗಳಲ್ಲಿ ತ್ರಿವಿಕ್ರಮನಾಗಿ ಬೆಳೆದು, ತನ್ನ ಅಸ್ತಿತ್ವವನ್ನು ಸ್ಥಾಪಿಸಿ ನಮ್ಮನ್ನೆಲ್ಲ ಹೀಗೆ ಆಳುತ್ತದೆ ಎಂದು? ಅದಕ್ಕೇ ಇದನ್ನು ‘ಮಾಯಾಬಜಾರ್’ ಎಂದು ಕರೆಯುವುದು! * * * ಡಿಸೆಂಬರ್ 28, 1895 ಪ್ರಪಂಚದ ಚಲನಚಿತ್ರಜಗತ್ತಿಗೆ ವಿಶೇಷ ದಿನವಾದರೆ; ಮೇ 3, 1913 ಭಾರತದ ಚಲನಚಿತ್ರರಂಗಕ್ಕೆ ಪ್ರಮುಖವಾದ ವರ್ಷ. ಅಲ್ಲಿ ಲ್ಯೂಮಿಯೇರ್ ಸಹೋದರರು ಜಗತ್ತಿನ ಚಲನಚಿತ್ರಕ್ಕೆ ಮಾತಾಪಿತೃಗಳಾದರೆ; ಇಲ್ಲಿ ದಾದಾಸಾಹೇಬ್ ಫಾಲ್ಕೆ ‘ರಾಜಾ ಹರಿಶ್ಚಂದ್ರ’ ಚಿತ್ರವನ್ನು ತಯಾರಿಸಿ ಭಾರತದ ಪಾಲಿಗೆ ಚಲನಚಿತ್ರದ …

ಓದನ್ನು ಮುಂದುವರೆಸಿ