Monthly Archives: ಜುಲೈ, 2011
‘ಬೆಟ್ಟದ ಜೀವ’ದ ಬಗ್ಗೆ ಅನಂತಮೂರ್ತಿ…
ಅಂದು, ಗುರುವಾರ ಜೂನ್ ೨೩ನೇ ದಿನ. ‘ಬೆಟ್ಟದ ಜೀವ’ ಚಿತ್ರದ ವಿಶೇಷ ಪ್ರದರ್ಶನವನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೆ. ಡಾ.ಯು.ಆರ್.ಅನಂತಮೂರ್ತಿ ಚಿತ್ರನೋಡಲು ಬಂದಿದ್ದರು. ‘ನೀವು ಬಂದದ್ದು ತುಂಬಾ ಸಂತೋಷ ಸಾರ್’ ಎಂದೆ. ಅದಕ್ಕೆ ಅವರು, ‘ಆದ್ರೆ ನಂಗೆ ಇರುಸು-ಮುರುಸಾಗ್ತಾ ಇದೆ ಕಣಯ್ಯಾ’ ಎಂದರು. ‘ಯಾಕ್ ಸಾರ್?!’ ಎಂದೆ. ‘ನಾನು ಈ ಮಾಲ್‌ಗಳ ವಿರೋಧಿ. ಇದನ್ನು ಒಡೆದು ಹಾಕಬೇಕು ಅಂತ ಕರೆ ಕೊಟ್ಟವನು. ಈಗ ನೋಡು, ಎಂಥ ವೈರುಧ್ಯ! ನಿನ್ನ ಸಿನಿಮಾ ನೋಡುವ ಕಾರಣದಿಂದ ಇವತ್ತು ಇದರೊಳಕ್ಕೆ ಹೆಜ್ಜೆ ಇಡಲೇ …
ಒಂದೇ ದಿನ, ಮೂರು ಕಡೆ, ಮೂರು ಚಿತ್ರಗಳ ಪ್ರದರ್ಶನ…
ನಿನ್ನೆ, ಅಂದರೆ ೨೦೧೧ ಜುಲೈ ತಿಂಗಳ ಹದಿಮೂರನೇ ದಿನ, ನನಗೆ ಸಂತೋಷವಾಗಲು ಮೂರು ಕಾರಣಗಳಿದ್ದವು. ಒಂದು, ‘ಬೆಟ್ಟದ ಜೀವ’ ಚಿತ್ರ ಮೂರನೇ ವಾರ ಚಿತ್ರಮಂದರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂದೂ ಕೂಡ ತುಂಬ ಫೋನ್ ಮಾಡಿ ಚಿತ್ರನೋಡಲು ಎರಡನೇ ಬಾರಿ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಇದು ನಿಜವಾದ ಸಮಾಧಾನವಲ್ಲವೇ? ಎರಡು, ಮಧ್ಯಾಹ್ನ ಬೆಂಗಳೂರಿನ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ‘ತುತ್ತೂರಿ’ಚಿತ್ರವನ್ನು ಪ್ರದರ್ಶಿಸಿ ನಂತರ ಪ್ರೇಕ್ಷಕರೊಂದಿಗೆ ಚರ್ಚೆ ಏರ್ಪಡಿಸಿದ್ದರು. ಚಿತ್ರ ಬಂದು ಆರು ವರ್ಷ ಕಳೆದಿದ್ದರೂ, ಈ ಕಥಾವಸ್ತು ಅಂದಿಗಿಂತ …
ಪುಟ್ಟಕ್ಕನ ಹೆದ್ದಾರಿ!
ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು. ಆಗ ನಾನು ಕರ್ನಾಟಕ ಟೆಲಿವಿಷನ್ ಸಂಘಟನೆಯ ಅಧ್ಯಕ್ಷನಾಗಿದ್ದೆ, ಗೆಳೆಯ ಬಿ.ಸುರೇಶ ಕಾರ್ಯದರ್ಶಿಯಾಗಿದ್ದ. ದಾವಣಗೆರೆಯಲ್ಲಿ ನಮ್ಮ ಸಂಘಟನೆಯಿಂದ ಮನರಂಜನಾ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆವು. ಹಾಗಾಗಿ ಒಂದು ತಿಂಗಳುಗಳ ಕಾಲ ದಾವಣಗೆರೆಗೂ ಬೆಂಗಳೂರಿಗೂ ವಾರಕ್ಕೆ ಎರಡು ಮೂರು ಬಾರಿಯಂತೆ ಕಾರಿನಲ್ಲಿ ಹೋಗಿ ಬಂದು ಮಾಡುತ್ತಿದ್ದೆವು. ತುಮಕೂರು ದಾಟಿದ ನಂತರ ವಾಜಪೇಯಿ ಕನಸಿನ ಕೂಸಾದ ಷಟ್ಪಥದ ಹೆದ್ದಾರಿ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಆಗಿನ್ನೂ ಈ ‘ನೈಸ್’ ಇತ್ಯಾದಿಗಳು ಬಂದಿರಲಿಲ್ಲ. ಕರ್ನಾಟಕದ ಮಟ್ಟಿಗೆ ಇದೇ ದೊಡ್ಡ ಹೆದ್ದಾರಿ. …
ಹೂವಾಗು ಬೆಟ್ಟದಡಿ…
ಮೂವತ್ತು ವರ್ಷಗಳ ಹಿಂದಿನ ಮಾತು. ಆಗ ನಾನು ಹೈಸ್ಕೂಲ್ ಓದುತ್ತಿದ್ದೆ. ವಾರಕ್ಕೊಮ್ಮೆ ನಮ್ಮ ಹಳ್ಳಿಯ ಹಳೇ ಲೈಬ್ರರಿಯಿಂದ ಹೆಚ್.ನರಸಿಂಹಯ್ಯ, ಮಾಭೀಶೇ ಮುಂತಾದವರ ಕಾದಂಬರಿಗಳನ್ನು ತಂದು ಓದಿ ಅಚ್ಚರಿಪಡುತ್ತಾ ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿ ಎಂದು ಬೀಗುತ್ತಿದ್ದೆ. ಒಮ್ಮೆ ಮೇಷ್ಟ್ರ ಕೈಗೆ ಈ ಕಾದಂಬರಿ ಸಿಕ್ಕಿತು, ನನ್ನನ್ನು ಕರೆದು, ‘ನೀನು ಓದಿದರೆ ಶಿವರಾಮ ಕಾರಂತರು, ಕುವೆಂಪು, ಎಸ್.ಎಲ್.ಭೈರಪ್ಪ ಮುಂತಾದವರ ಕೃತಿಗಳನ್ನು ಓದಬೇಕು, ಬುದ್ಧಿ ಬೆಳೆಯುತ್ತದೆ..’ ಎಂದರು. ಆಗ ನಮ್ಮ ಅಣ್ಣ ಕನ್ನಡ ಎಂ.ಎ. ಮಾಡುತ್ತಿದ್ದ. ಆತನ ಬಳಿ ‘ಬೆಟ್ಟದ ಜೀವ’ …