ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

Monthly Archives: ಜನವರಿ, 2011

ಹೇಳಿ ಹೋಗಬಾರದಿತ್ತೇ?

ಜನವರಿ ೧೦, ಕಳೆದ ಸೋಮವಾರ, ಸಮಯ ಮಧ್ಯಾಹ್ನ ಸುಮಾರು ೩:೫೦. ಕಂಪ್ಯೂಟರಿನ ಮುಂದೆ ಕುಳಿತು ಏನೋ ಕೆಲಸ ಮಾಡುತ್ತಿದ್ದೆ. ಮೊಬೈಲ್ ರಿಂಗಾಯಿತು. ಯಾರದ್ದಿರಬಹುದೆಂದು ಕುತೂಹಲದಿಂದ ನೋಡಿದೆ. ಎಸ್.ರಾಮಚಂದ್ರ ಎಂಬ ಹೆಸರು ಸ್ಕ್ರೀನ್ ಮೇಲೆ ಕಾಣಿಸಿತು. ಓಹ್! ನಾನು ಸ್ವೀಕರಿಸಲೇಬೇಕಾದ ಕರೆ ಅದು. 2011ರ ಹೊಸವರ್ಷದ ಮೊದಲದಿನ ಸಂಜೆ ನನ್ನ ‘ಬೆಟ್ಟದಜೀವ’ ಚಿತ್ರದ ಪ್ರಥಮ ಪ್ರದರ್ಶನ ನೋಡಲು ರಾಮಚಂದ್ರ ಮಲ್ಲೇಶ್ವರಂನ ಹದಿನೆಂಟನೇ ಕ್ರಾಸ್‌ನ ‘ಶ್ರೀಗಂಧ’ ಪ್ರೀವ್ಯೂ ಥಿಯೇಟರ್‌ಗೆ ಬಂದಿದ್ದರು. ಹತ್ತಿರ ಬಂದು, ‘ಶೇಷಾದ್ರಿ, ನನಗೆ ಆರೋಗ್ಯ ಸರಿಯಿಲ್ಲ, ಆದರೂ …

ಓದನ್ನು ಮುಂದುವರೆಸಿ

‘ಯೆಸ್’ ರಾಮಚಂದ್ರ ‘ನೋ’ ಅನ್ನಬಾರದಿತ್ತಾ?

ಎಸ್. ರಾಮಚಂದ್ರ ತಮ್ಮ ಚಿತ್ರರಂಗದ ವೃತ್ತಿ ಬದುಕಿನಲ್ಲಿ ನಾನು ಕಂಡಂತೆ, ಯಾವುದಕ್ಕೂ ‘ನೋ’ ಅಂದವರೇ ಅಲ್ಲ. ಆರು ವರ್ಷಗಳ ಹಿಂದೆ ನಾನು ‘ಬೇರು’ಚಿತ್ರ ಮಾಡಬೇಕೆಂದಿದ್ದೇನೆ ನೀವು ಛಾಯಾಗ್ರಾಹಕರಾಗಿರಬೇಕು ಎಂದಾಗ ‘ಯೆಸ್’ ಎಂದರು. ದೇವರಾಯನದುರ್ಗದಲ್ಲಿ ಬೋಳುಗುಡ್ಡವನ್ನು ಏರಿ ಚಿತ್ರೀಕರಿಸಬೇಕಲ್ಲ ಎಂದಾಗ ‘ಯೆಸ್, ಕಮಾನ್’ ಎಂದು ನಮಗಿಂತ ಮುಂಚೆಯೇ ಕಲ್ಲುಗುಡ್ಡವನ್ನು ಸರ ಸರ ಏರಿ ಚಿತ್ರೀಕರಿಸಿದ್ದರು. ಆನಂತರ ೨೦೦೮ರಲ್ಲಿ ದೂರದ ಕಾಶಿಯಲ್ಲಿ ‘ವಿಮುಕ್ತಿ’ಯನ್ನು ಚಿತ್ರೀಕರಿಸಬೇಕೆಂದಿದ್ದೇನೆ ಎಂದಾಗ ‘ಯೆಸ್’ ಎಂದರು. ಆದರೆ ಅಲ್ಲಿಯ ಒಳಾಂಗಣದಲ್ಲಿ ಲೈಟ್ ಬಳಸುವಂತಿಲ್ಲ ಎಂದಾಗ ಕೂಡ ಹಿಂದೆ-ಮುಂದೆ …

ಓದನ್ನು ಮುಂದುವರೆಸಿ

ಕನ್ನಡ ಸಿನಿಮಾ ಹಾಗೂ ಕನ್ನಡ ಸಾಹಿತ್ಯ

‘ನೀವು ಎಷ್ಟು ಪುಸ್ತಕ ಓದಿದ್ದೀರಿ?’ ಎಂಬ ಪ್ರಶ್ನೆ ಕೇಳಿದಾಗ ಸಿಗುವ ಉತ್ತರಕ್ಕಿಂತ, ‘ನೀವು ಎಷ್ಟು ಸಿನಿಮಾ ನೋಡಿದ್ದೀರಿ?’ ಎಂಬ ಪ್ರಶ್ನೆಗೆ ಸಿಗುವ ಉತ್ತರ ಖಂಡಿತ ಭಿನ್ನವಾಗಿರುತ್ತದೆ! ನಮ್ಮ ನಡುವೆ ಪುಸ್ತಕ ಓದದವರು ಸಾಕಷ್ಟು ಸಂಖ್ಯೆಯಲ್ಲಿ ಸಿಗಬಹುದೇನೋ, ಆದರೆ ಸಿನಿಮಾ ನೋಡದ ಕಣ್ಣುಗಳು ಸಿಗುವುದು ಸ್ವಲ್ಪ ದುಸ್ತರವೇ! ಹಾಗೆಂದ ಮಾತ್ರಕ್ಕೇ ಸಿನಿಮಾ ಹೆಚ್ಚು, ಸಾಹಿತ್ಯ ಕೃತಿ ಕಡಿಮೆ ಎಂದೇನೂ ಅಲ್ಲ. ಆದರೆ ‘ಓದುಗರಿಗಿಂತ’ ‘ನೋಡುಗರ’ ಸಂಖ್ಯೆಯೇ ಹೆಚ್ಚಾಗಿರುವುದು ಇಂದಿನ ಸ್ಥಿತಿ. ಇದು ಸದ್ಯದ ಸಮಾಜಕ್ಕೆ ಹಿಡಿದ ಕನ್ನಡಿಯೂ ಹೌದು. …

ಓದನ್ನು ಮುಂದುವರೆಸಿ

‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ – ಕಥೆಯೊಳಗೆ ಕಥೆ ಹುಟ್ಟಿ!

ಆತ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಮಾಡಿದ ಸಾಹಸಗಳು ಒಂದೆರಡಲ್ಲ.. ಅದು 1895ನೇ ಇಸವಿ. ಆಗಿನ್ನೂ ಯಾರೂ ಆ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ಈತ ಮಾಡಿದ! ಒಂದು ಪುಟ್ಟ ಸ್ಟಿಲ್ ಕ್ಯಾಮರಾ ತಂದು ತನ್ನದೇ ಒಂದು ಸ್ಟುಡಿಯೋ ಸ್ಥಾಪಿಸಿದ. ತನ್ನ ಈ ಸಾಹಸವನ್ನು ಮೆಚ್ಚಿ ಜನ ಶಹಬ್ಬಾಸ್ ಎನ್ನುತ್ತಾರೆ ಎಂದು ಆತ ಭಾವಿಸಿದ್ದ. ಆದರೆ ಅವರು ಅದನ್ನು ನೋಡಿ ಹೆದರಿ ಓಡತೊಡಗಿದರು. ‘ಕ್ಯಾಮರಾ ತನ್ನ ಎದುರು ನಿಂತವನ ಜೀವವನ್ನೇ ಬಲಿ ತೆಗೆಯುತ್ತದೆ!’ ಎಂಬ ಗಾಳಿ ಸುದ್ದಿ ಹರಡಿ …

ಓದನ್ನು ಮುಂದುವರೆಸಿ

17 ಸೆಕೆಂಡುಗಳ ರೋಮಾಂಚನ!

2001 ನೇ ಇಸವಿಯ ಡಿಸೆಂಬರ್ ತಿಂಗಳ 12 ನೇ ದಿನದ ಸಂಜೆ. ಅದು ನನ್ನ ಬದುಕಿನ ತುಂಬ ವಿಶೇಷವಾದ ದಿನ! I was walking on the ninth cloud!! ದೆಹಲಿಯ ಪ್ರತಿಷ್ಠ ವಿಜ್ಞಾನಭವನದ ವಿಶಾಲವಾದ ಹಾಲ್‌ನಲ್ಲಿ, ಕಡು ನೀಲಿ Velvet ನ ಮೆತ್ತನೆಯ ಹಾಸ್ ಮೇಲೆ ಡಯಾಸ್‌ಗೆ ಹತ್ತುವ ಮೆಟ್ಟಿಲುಗಳ ಕೆಳಗೆ ಒಂದು ಬದಿಯಲ್ಲಿ ನಾನು ನಿಂತಿದ್ದೆ. ನನಗೆ ಸುಮಾರು ಇಪ್ಪತ್ತು ಅಡಿ ದೂರದಲ್ಲಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ನಿಂತಿದ್ದರು. ಅವರಿಂದ ಪ್ರಶಸ್ತಿ ಸ್ವೀಕರಿಸಲು ನಾನು ನನ್ನ …

ಓದನ್ನು ಮುಂದುವರೆಸಿ